Sunday, November 15, 2020

ಚಿಗುರೆಲೆ



ಚಿಗುರಿದ ಎಲೆ ನೋಡಲದೆಷ್ಟು ಚಂದ
ಆಡುವನು ಅದರಲಿ ಹೂವಿನ ಕಂದ
ಅರಳಲು ಕೊಡುವನು ಮಕರಂದ
ಹೊರಸೂಸುವನು ಸುಗಂಧ
ಹೆಚ್ಚಿಸುವನು ತನ್ನೆಲೆಗಳ ಅಂದ





Friday, July 10, 2020

ಗುರು

ಕಲಿಕೆಗೆ ಸಾಧನಗಳು ಇರಬಹುದು  ನೂರು
ಅದರ ಅಡಿಪಾಯವ ಹಾಕುವವನೇ ಗುರು
ಗಟ್ಟಿಯಾಗಿದ್ದರೆ ಮರದ ಬೇರು
ಉರುಳದು ಗಾಳಿ ಬೀಸಿದರೂ ಜೋರು
ಬರವಿದ್ದರೂ ಬರುವುದು ಮರದಲ್ಲಿ ಚಿಗುರು

ಇತ್ತೀಚಿಗೆ ಹೆಚ್ಚಾಗಿದೆ ಕೊರೋನಾದ ಪೊಗರು
ಜೋರಾಗಿದೆ ಆನ್ಲೈನ್ ಗುರುವಿನ ಕಾರುಬಾರು
ಮಕ್ಕಳಿಗೆ ಪರದೆಯ ನೋಡಿ ಕಲಿಯಲು ಬೇಜಾರು
ಬೇಕೇನು ಕಂದಮ್ಮಗಳಿಗೆ ಈ ತರಹದ ಜೋರು
ಕಮರದಿರಲಿ ಕಲಿಕೆಯ ಚಿಗುರು

Sunday, May 31, 2020

ಮಹಾಭಾರತ

--------- ಭಾಗ 1---------

ಪ್ರತಿಜ್ಞೆಯ ಮಾಡಿದನು ಭೀಷ್ಮನು
ಸಂಸಾರವನ್ನೆಂದಿಗೂ ಹೂಡೆನು
ಸಿಂಹಾಸನವನ್ನೆಂದಿಗೂ ಏರೆನು
ನಾನೆಂದೂ ಹಸ್ತಿನಾಪುರದರಸರ ದಾಸನು
ಹೀಗೆಂದು ಸತ್ಯವತಿಯನು ಓಲೈಸಿದನು
ತಂದೆಯ ಜೊತೆ ಅವಳ ಲಗ್ನವ ಮಾಡಿದನು

ಶಂತನು ಸತ್ಯವತಿಯರಿಗಾಯಿತು ಪುತ್ರ ಸಂತಾನ
ಹಿರಿಮಗ ಚಿತ್ರಾಂಗದ ಮಡಿದನು ಮಾಡುತ ಕದನ
ಕಿರಿಮಗ ವಿಚಿತ್ರವೀರ್ಯ ಅಲಂಕರಿಸಿದನು ಸಿಂಹಾಸನ
ಕಾಶೀಕುವರಿಯರ ಜೊತೆ ಆಯಿತವನ ಲಗ್ನ
ಸಂತಾನವಿಲ್ಲದೇ ಹೊಂದಿದನು ಅವನು ಅಕಾಲ ಮರಣ
ಬರಿದಾಯಿತು ಉತ್ತರಾಧಿಕಾರಿಯಿಲ್ಲದೆ ಸಿಂಹಾಸನ

ಸತ್ಯವತಿಗೆ ಕಾಡಿತು ಹಸ್ತಿನಾಪುರದ ಉತ್ತರಾಧಿಕಾರಿಯ ಚಿಂತೆ
ಆದೇಶ ಕೊಟ್ಟಳು ಮಗ ವ್ಯಾಸರಿಗೆ ನಿಯೋಗ ಮಾಡುವಂತೆ
ಋಷಿಯ ರೂಪವ ಕಂಡು ಕಣ್ಣು ಮುಚ್ಚಿ ನಿಂತಳು ಅಂಬಿಕೆ
ಕುರುಡು ಮಗ ಧೃತರಾಷ್ಟ್ರನ ಹೆತ್ತಳು ಆಕೆ
ಋಷಿಯ ರೂಪವ ಕಂಡು ಬಿಳಿಚಿದಳು ಅಂಬಾಲಿಕೆ
ಬಿಳಿಚಿಕೊಂಡವನಂತಿದ್ದ ಪಾಂಡುವನ್ನು ಪಡೆದಳಾಕೆ

ಮತ್ತೊಮ್ಮೆ ಋಷಿಯೆಡೆಗೆ ತೆರಳಲು ಹೆದರಿದಳು ಅಂಬಿಕೆ
ಕಳಿಸಿದಳು ತನ್ನ ದಾಸಿಯನು ವ್ಯಾಸರೊಡನೆ ನಿಯೋಗಕೆ
ಋಷಿಯ ರೂಪವ ಕಡೆಗಣಿಸಿ ಸಹಜವಾಗಿದ್ದಳು ದಾಸಿ  
ಆರೋಗ್ಯವಂತ ಬುದ್ಧಿಮತಿಯಾದ ವಿದುರನ ಪಡೆದಳಾಕೆ
ಭೀಷ್ಮನು  ಆಸರೆಯಾಗಿ ನಿಂತನು ಸಿಂಹಾಸನಕೆ
ಧೃತರಾಷ್ಟ್ರ ಪಾಂಡು ವಿದುರರು ಬಂದರು ಪ್ರಾಯಕೆ

Tuesday, May 5, 2020

ಬ್ರಹ್ಮಕಮಲ




ಅರಳಿತು ಬ್ರಹ್ಮಕಮಲ ಸುಗಂಧವ ಬೀರುತ
ಬೆಳದಿಂಗಳ ತಂಪನು ಹೀರುತ
ಕಂಗೊಳಿಸಿದೆ ನಕ್ಷತ್ರದಂತೆ ಮಿನುಗುತ
ಒಂದು ರಾತ್ರಿ ಮಾತ್ರ ಅದು ಜೀವಿತ
ಅರ್ಥವಿಲ್ಲದ ನೂರು ದಿನಕ್ಕಿಂತ
ಅರ್ಥಪೂರ್ಣವಾದ ಒಂದು ದಿನ ಸಾಕೆನ್ನುತ

Sunday, May 3, 2020

ಸಂಕ್ಷಿಪ್ತ ರಾಮಾಯಣ

ದಶರಥನು ಕತ್ತಲಿನಲಿ ಹೂಡಿದನು ಬಾಣ
ಕಳೆದನು ಶ್ರವಣನ ಪ್ರಾಣ
ಶ್ರವಣನ ಅಂಧ ಮಾತಾಪಿತರೂ ತೊರೆದರು ಪ್ರಾಣ
ದಶರಥನನು ಶಪಿಸಿದರು ಅವರಂತೆಯೇ ಹೊಂದಲು ಮರಣ

ದಶರಥನು ಕೈಕೇಯಿಗೆ ಕೊಟ್ಟ ವಚನದ ಕಾರಣ
ವನವಾಸಕೆ ಹೋದರು ರಾಮ ಸೀತೆ ಲಕ್ಷ್ಮಣ
ಅಲ್ಲಿ ರಾವಣನು ಮಾಡಿದನು ಸೀತಾಪಹರಣ
ರಾಮನು ಮಾಡಿದನು ಲಂಕೆಯ ಮೇಲೆ ಆಕ್ರಮಣ

ಯುದ್ಧದಲಿ ಹತರಾದರು  ಕುಂಭಕರ್ಣ ರಾವಣ
ಲಂಕಾಧಿಪತಿಯಾದನು ವಿಭೀಷಣ
ವನವಾಸವು ಆಗಿರಲು ಸಂಪೂರ್ಣ
ಅಯೋಧ್ಯೆಗೆ ಆಗಮಿಸಿದರು ರಾಮ ಸೀತೆ ಲಕ್ಷ್ಮಣ

ಆಯಿತು ರಾಮನ ಸಿಂಹಾಸನಾರೋಹಣ
ಎಲ್ಲರೂ ಹೊಗಳಿದರು ರಾಮನ ರಾಜಕಾರಣ
ಕೆಲ ಸಂಶಯಗ್ರಸ್ತ ಪ್ರಜೆಗಳು ಬಿಟ್ಟರು ಮಾತಿನ ಬಾಣ     
ಅದಾಯಿತು ಗರ್ಭವತಿ  ಸೀತಾ ಪರಿತ್ಯಾಗಕೆ ಕಾರಣ

ವಾಲ್ಮೀಕಿ ಆಶ್ರಮದಲಿ ಆಯಿತು ಲವಕುಶರ ಜನನ
ಬಾಲಕರು ಪಡೆದರು ಶಸ್ತ್ರಾಭ್ಯಾಸದ ವಿದ್ಯಾರ್ಜನ
ಕಟ್ಟಿದರವರು ರಾಮನ ಅಶ್ವಮೇಧ ಯಾಗದ ಹಯವನ್ನ
ಹಿಮ್ಮೆಟ್ಟಿಸಿದರು ಗುರುತಿಲ್ಲದ ತಮ್ಮ ಚಿಕ್ಕಪ್ಪರನ್ನ

ಗುರುಗಳು ತಪ್ಪಿಸಿದರು ರಾಮನೊಂದಿಗೆ ಬಾಲಕರ ಕದನ
ಆಜ್ಞಾಪಿಸಿದರು ಕ್ಷಮೆ ಕೇಳಿ ಹಿಂತಿರುಗಿಸಲು ಹಯವನ್ನ
ಅಯೋಧ್ಯೆಯಲಿ ಬಾಲಕರು ಹಾಡಲು ರಾಮಾಯಣದ ಕವನ
ಕಣ್ಣೀರಿಟ್ಟರು ಸೀತೆಯ ಕಥೆ ಕೇಳಿದ  ಜನ

ಬಾಲಕರೆಂದರು ಸೀತಾರಾಮರೆ ನಮ್ಮ ತಾಯಿ ತಂದೆ
ರಾಮ ಅದು ನಿಜವೆಂದು ಸೀತೆಗೆ ಶಪಥವ ಮಾಡೆಂದ ಎಲ್ಲರ ಮುಂದೆ
ಸೀತೆಯೆಂದಳು ಸಹಿಸೆನು ಇಂಥ ಅಪಮಾನವನು ಇನ್ನು ಮುಂದೆ
ಭೂತಾಯಿಯ ಮಡಿಲನು ಸೇರಿದಳು ಅವಳು ಎಲ್ಲರ ಕಣ್ಣ ಮುಂದೆ

ರಾಜಧರ್ಮವ ಪಾಲಿಸಲು ಸೀತೆಯ ಕಳೆದುಕೊಂಡನು ರಾಮ
ಕೊನೆಯಲಿ ಬಂದೊದಗಿತು ಲಕ್ಷ್ಮಣನನ್ನೂ ಪರಿತ್ಯಜಿಸ ಬೇಕಾದ ಕರ್ಮ
ಮೌಲ್ಯಗಳ ಮಹತ್ವವ ಸಾರಿದನು ಮರ್ಯಾದಾ ಪುರುಷೋತ್ತಮ
ಅವತಾರವ ಮುಗಿಸಿ ಸೇರಿದನು ಪರಂಧಾಮ

Thursday, March 19, 2020

ಪಟ್ಟಣದ ಜೀವನ


ದೂರದ ಹಳ್ಳಿಯಲ್ಲಿ ಹುಟ್ಟಿರುವೆ
ಪಟ್ಟಣದ ಕಾಂಕ್ರಿಟ್ ಕಾಡಲಿ ನೆಲೆಸಿರುವೆ
ಸಿಕ್ಕ ಸಾರವನು ಹೀರಿರುವೆ
ಅದರಿಂದ ಅರಳಿ ನಿಂತಿರುವೆ

ಇಲ್ಲಿದೆ ಹೊಗೆ ಧೂಳಿನ ಚೆಲ್ಲಾಟ
ನೀರಿಗೆ ಪ್ರತಿದಿನ ಗೋಳಾಟ
ಬಗೆಬಗೆ ರೋಗಗಳ ಕಾಟ
ಬೇಗನೆ ಕಿತ್ತು ಇಲ್ಲಿಂದ ಗೂಟ

Wednesday, March 18, 2020

ಕರೋನಾ ಕೋವಿಡ್ ಹತ್ತೊಂಬತ್ತು ಮತ್ತು ಜಗತ್ತು

ಎಲ್ಲೋ ಇದ್ದ ಕೋವಿಡ್ ಹತ್ತೊಂಬತ್ತು
ಹೊಕ್ಕಿದೆ ಮಾನವರ ಜಗತ್ತು

ತಂದಿದೆ ಎಲ್ಲೆಡೆ ಆಪತ್ತು
ಬೀಳಿಸಿದೆ ಎಲ್ಲರನ್ನು  ಬೇಸ್ತು

ದಿಗಿಲಾಗಿದೆ ಮುಟ್ಟಲು ಯಾವುದೇ ವಸ್ತು
ಎಲ್ಲರಿಗೂ ಕೈ ತೊಳೆದು ತೊಳೆದು ಸುಸ್ತು

ಬಿಕರಿಯಾಗದೇ ಕುಳಿತಿವೆ ನೂರಾರು ವಸ್ತು
ಅದು ತರಬಹುದು ಹಲವರ ನೌಕರಿಗೆ ಕುತ್ತು

ಸರಕಾರ ವಿಧಿಸಿದೆ ಹಲವಾರು ಷರತ್ತು
ಸಾಕಾಗಿದೆ ಎಲ್ಲರಿಗೂ ಮನೆಯಲಿ ಕುತ್ತುಕುತ್ತು

Tuesday, March 17, 2020

ಯುಗಾದಿಯ ಆಗಮನ



ಬೇಸಿಗೆಯ ಬಿರು ಬಿಸಿಲಿನಲಿ
ಚಿಗುರೆಲೆಗಳ ಸೇರಿಸಿ ಹೆಣೆದ ಬಟ್ಟೆಯಲಿ
ಮಾಡಿದ ಕೊಡೆಯನು ಹಿಡಿದು ನಿಂತಿವೆ ಬಳುಕುತಲಿ
ನಮ್ಮ ಬದುಕಿಸಿ ನೀ ಬದುಕು ಎನ್ನುತಲಿ

ಬೆವರಹನಿಯ ಗಾಳಿಯಲಿ ತೇಲಿಸಿ
ಬೇಸಿಗೆಯ ಧಗೆಯನು ಉಡುಗಿಸಿ
ಮುಡಿಗೇರಿಸಿದ ಹೂಗಳ ಕಂಪನು ಸೂಸಿ
ನಿಂತಿವೆ ಯುಗಾದಿಯ ಆಗಮನಕೆ ಕಾತರಿಸಿ

Wednesday, March 11, 2020

ಹೋಳಿ ಹಬ್ಬ

ಇರಲಿ ಯಾವುದೇ ಪೋಷಾಕು
ಧರಿಸು ಬಣ್ಣಗಳ ಮುಸುಕು
ಸಿಟ್ಟು ಸೆಡೆಗಳ ಬಿಸಾಕು
ಬಂಧುಮಿತ್ರರಿಗೆ ಬಣ್ಣವ ಹಾಕು
ದುಃಖ ದುಮ್ಮಾನಗಳನು ನೂಕು
ಸಿಹಿತಿನಿಸುಗಳ ಮೆಲುಕು ಹಾಕು
ಇದಕ್ಕೆಲ್ಲ  ಹೋಳಿಹಬ್ಬವೇ ಬೇಕು


ಹುಣ್ಣಿಮೆ ಚಂದಿರ ಬಣ್ಣವ ತಂದನು 
ಹೋಳಿಯ ಆಟವ ಆಡಿಸಲು
ನಮ್ಮನ್ನು ಮುಳುಗಿಸಿ ಬಣ್ಣದಲಿ
ತಾ ನಗುತಿಹನು ಶ್ವೇತ ವರ್ಣದಲಿ


Friday, February 14, 2020

ಬೋರ್ವೆಲ್



ಬೋರ್ವೆಲ್ ಡ್ರಿಲ್ಲು
ಎಬ್ಬಿಸಿದೆ ಗುಲ್ಲು
ಧೂಳು ಎಲ್ಲೆಲ್ಲು
ಶಾಂತಿಗೆ ಕಲ್ಲು
ನೀರು ಬಂದ್ರೆ ಥ್ರಿಲ್ಲು
ಇಲ್ದಿದ್ರೆ ಹಣಪೋಲು

Wednesday, February 12, 2020

ಜೀವನ

ಅರ್ಥವಾಗದವು ಬಹಳಷ್ಟಿದವೆ ಜಗದಲ್ಲಿ ನೋಡಾ
ಅರ್ಥವಾದವು ವಿರಳವು ನೋಡಾ
ಅರ್ಥವಾದುವಕೆ ಗೂಡಾರ್ಥವು ನೋಡಾ
ಗೂಡಾರ್ಥಗಳೊಡನಾಟವೇ ಜೀವನವು ನೋಡಾ

Sunday, February 9, 2020

ರಾಷ್ಟ್ರೀಯ ತೋಟಗಾರಿಕೆ ಮೇಳ 2020


ಹೆಸರಘಟ್ಟದ ರಾಷ್ಟ್ರೀಯ ತೋಟಗಾರಿಕೆ ಮೇಳ
ವಿಧವಿಧ  ಹೂ ತರಕಾರಿ ಬೆಳೆ ಪ್ರದರ್ಶನದ ಸಮ್ಮೇಳ

ಒಂದೆಲಗ ಟಿಂಕ್ಚರ್ ಗಿಡ ಸಾಸಿವೆ ಮೆಕ್ಕೆಜೋಳ
ಅವರೆ  ಕ್ಯಾರೆಟ್ ಸೋರೆಕಾಯಿ ಈರುಳ್ಳಿ ಕುಂಬಳ

ಬಂದಿದೆ ಹೊಸಬಗೆಯ ತರಕಾರಿ ಚೀನಿಕಾಯಿ
ಮಂಗಳೂರು ಕಡೆ ಸಿಗುವ ಕಹಿಯಿಲ್ಲದ ಹಾಗಲಕಾಯಿ 

ಇಲ್ಲಿದೆ ಮಣ್ಣಿಲ್ಲದೆ ಬೆಳೆ ತೆಗೆಯುವ ಹೊಸ ವಿಧಾನ
ತೆಂಗಿನ ತವಡಲ್ಲಿ  ಬೆಳೆದಿರುವರು ವಿವಿಧ ತರಕಾರಿಗಳನ್ನ

ಬಣ್ಣಬಣ್ಣದ ಗ್ಲ್ಯಾಡಿ ಯೋಲಸ್ ಗುಲಾಬಿ ಸೇವಂತಿಗೆ
ಡ್ರ್ಯಾಗ್ ನ್ ಪ್ರುಟ್ ಮತ್ತಿತರ ಸಸ್ಯಗಳು ಔಷಧಿ ಗೆ

ಇತ್ತೀಚಿಗೆ ತೋಟಕೆ  ಬಂದಿದೆ ದೀಪದ ಬಲೆಯ ಚಲಾವಣೆ 
ರಾಸಾಯನಿಕ ಇಲ್ಲದೆ  ಬೆಂಡೆಬದನೆ ಕೀಟಗಳ ನಿರ್ವಹಣೆ

ಎಲ್ಲರಿಗೂ ಫ್ರೀ  ಬಿಸಿಬೇಳೆ ಮೊಸರನ್ನದ ಬಿಸಿಯೂಟ
ಫ್ರೀಯಾಗಿ ಒಳಹೋಗಿ ಬರಲು ಶಟಲ್ ಗಾಡಿಗಳ ಓಡಾಟ

 ನೋಡ ಬಂದವರಿಗೆ ದೊರಕಿದೆ ಹೊಸ ಅನುಭವ
 ಸಿಕ್ಕಿದೆ ಹೆಸರಘಟ್ಟದ  ಹಸಿರಿನಲಿ ಕಳೆವ ಕ್ಷಣವ


Wednesday, February 5, 2020

ಬಿರಿದ ಬೀಜ




ಬಿರಿಯುವ ಬೀಜವ ನೋಡಲ್ಲಿ
ಬರಿಗಣ್ಣಿಗೆ ಕಾಣದ ಪರಿಯಲ್ಲಿ

ಬೀಜವ ಬಿತ್ತಲು ಗೆರೆಯಲ್ಲಿ
ನಿಂತಿವೆ ಸಸಿ ಸಾಲಲ್ಲಿ

ಎಂಥಹ  ಸೋಜಿಗ ಜಗದಲ್ಲಿ
ವರ್ಣಿಸಲಸದಳ  ಮಾತಲ್ಲಿ

ತಳಮಳ ತುಂಬಿದ  ಮನದಲ್ಲಿ
ಹಾಸಿದೆ ಹಸಿರಿನ ರಂಗವಲ್ಲಿ

Monday, February 3, 2020

ಊಟ ಸ್ನಾನ ಮತ್ತು ಆರೋಗ್ಯ

ಒಡಲು ಹಸಿಯದೆ ಉಂಡರೆ ಏನು ಸುಖ?
ದೇಹ ಬೆವರದೆ ಮಿಂದರೆ ಅಲ್ಪಸುಖ

ಇರುವ ಸುತ್ತಣವ  ಶುಚಿಗೊಳಿಸಿ
ಕೈಗೆ ಮಣ್ಣ ಅಂಟಿಸಿ ಬೆವರನು ಹರಿಸಿ
ದೇಹವ ದಂಡಿಸಿ ಒಡಲನು ಸಡಿಲಿಸಿ

ಬೆವರಿ  ಮಿಂದರೆ ಪರಮಸುಖ
ಹಸಿದು ಉಂಡರೆ ಆರೋಗ್ಯದ ಕಡೆ ಮುಖ

Friday, January 31, 2020

ಕೆಂಪು ಗುಲಾಬಿ



ಮನೆಯ ಗಿಡದಲಿ ಅರಳಿದ ಗುಲಾಬಿ
ಕಣ್ಣನು ಸೆಳೆಯುವ ಕೆಂಪು ಗುಲಾಬಿ
ಕಂಪನು ಸೂಸುವ ಚಂದದ ಗುಲಾಬಿ
ಮನಕೆ ಮುದ ನೀಡುವ ಅಂದದ ಗುಲಾಬಿ

Thursday, January 30, 2020

ಸೂರ್ಯಾಸ್ತ



ಸೂರ್ಯನಿಗೆ ದುಃಖ  ಮುಳುಗುವ ಆತಂಕ
ಆಗಸದಿ ಚೆಲ್ಲುವನು ಕನಕ ಮುಳುಗುವ ತನಕ

ಮುಳುಗಿದ ಬಳಿಕ ಅವನೊಬ್ಬ ನಿರ್ಧನಿಕ
ಕಾಣನು ಮರುಹುಟ್ಟು ಪಡೆಯುವ  ತನಕ

Saturday, January 25, 2020

ಗಿಡದ ಟೊಂಗೆ



ದಾಸವಾಳ, ಮಲ್ಲಿಗೆಯ ಟೊಂಗೆ
    ನಾಲ್ಕಾರು ವಾರ ನೀರಲಿಟ್ಟರೆ ಹಂಗೆ
   ಕೊನರುವವು ಇಲ್ಲಿ ತೋರಿದಹಾಂಗೆ

Wednesday, January 22, 2020

ವನ್ಯ ಕರ್ನಾಟಕ






ವ್ಯಾಘ್ರನಿಗಿದು ತವರು
ಗಜಪಡೆಗಳಿಲ್ಲಿ ನೂರಾರು

ಕಪ್ಪು ಮೂತಿಯ ವಾನರ 
ಕೂಗುವನು ಅರಿತು ಸಂಚಕಾರ

ನವಿಲುಗಳ ನರ್ತನ  
ಇಳಿಸುವುದು ಪ್ರಸ್ಥಭೂಮಿಗೆ ನಂದನ

ಕಲ್ಲುಗುಡ್ಡದ ಕರಡಿ 
ತಿನ್ನುವನು ಗೆದ್ದಲುಗಳ ಹುಡುಕಾಡಿ

ಬಿಳಿ ಕಾಲಿನ ಕಾಡೆಮ್ಮೆ 
ನೀ ನಿಲ್ಲುವೆ ಕಲ್ಲಿನಂತೆ ಒಮ್ಮೊಮ್ಮೆ

ನೂರು ಬಗೆಯ ಮೀನುಗಳು
ಅನ್ವೇಷಿಸಿರದ ಹವಳಗಳು

ಚುಕ್ಕಿ ಮೈಯ ಚಿರತೆ 
ನಿನಗೆ ಮರವ ಹತ್ತಲೂ ಬರುತ್ತೆ

ಕೂಟದಲಿ ಬೇಟೆಯಾಡುವ ಕೆನ್ನಾಯಿ
 ನೀರಿನಲಿ ಪರಾಕ್ರಮ ತೋರುವ ನೀರ್ನಾಯಿ

ಇತರ ಉರಗಗಳ ನುಂಗುವ ಕಾಳಿಂಗ
ನಿನ್ನ ಶಾಂತಿಗಿಲ್ಲ ಇಲ್ಲಿ ಯಾವುದೇ ಭಂಗ

ಬಗೆಬಗೆಯ  ಬಣ್ಣದ ಹಕ್ಕಿ 
ಹರಿಯುತಿಹುದು ನಿನ್ನ ಸೊಬಗು ಉಕ್ಕಿ

ಮರದ ಮೇಲೆ ಅಡಗಿ ಕೂಡುವ ಓತಿ
ಮರದಿಂದ ಮರಕೆ ರೆಕ್ಕೆಬಿಚ್ಚಿ ಹಾರುತಿ

ನೂರಾರು ಬಗೆಯ ಕಪ್ಪೆಗಳು  
ಕಲಿತಿರುವವು ಕೆಲವು ಕೈಕಾಲ್ಸನ್ನೆ ಮಾಡಲು

ವಿಷದ ಹಣ್ಣುಗಳ ತಿನ್ನುವ ಹಾರ್ನಬಿಲ್
ನಿನಗಿಲ್ಲ ಭಯ ಇಲ್ಲಿ ಬಿಲ್ಕುಲ್

ಪಶ್ಚಿಮ ಘಟ್ಟದ ಆಕರ್ಷಣೆ 
ಹಾಕುವುದು ಮುಂಗಾರು ಮಳೆಗೆ ಮಣೆ

ತರುವುದು ಮಳೆ 
ಕಾಡಿಗೆ ಹೊಸ ಕಳೆ

ಜಲಮೂಲಗಳ ತುಂಬಿಸಿ 
ಕಾಡಿನ ದಾಹ ತಣಿಸಿ
ಹೊಸ ಚಕ್ರವ ಆರಂಭಿಸಿ.

https://www.zoosofkarnataka.com/wild-karnataka

Tuesday, January 21, 2020

ಶಾಲೆಯ ಪ್ರವಾಸದ ನೆನಪು

ಅದು ಶಾಲೆಯಲ್ಲಿನ ನಮ್ಮ ಮೊದಲ ಪ್ರವಾಸ
ಮೂಡಿಸಿತ್ತು  ವಿದ್ಯಾರ್ಥಿಗಳಲಿ ಎಲ್ಲಿಲ್ಲದ ಸಂತಸ 

ಮೈಸೂರು ಬೇಲೂರು ಹಳೇಬೀಡು ಆಗಿದ್ದವು ನಮ್ಮ ಪ್ರವಾಸ ತಾಣ
ಶಿಕ್ಷಕರು ನಿರ್ಧರಿಸಿದರು ಹೊರಡಲು ರಾತ್ರಿ ಪ್ರಯಾಣ

ತುಂಬಿ ತುಳುಕಿದವು ಬಸ್ಸಿನ ಸೀಟುಗಳು
ಸೀಟಿನ ನಡುವೆಯೂ ಹಾಕಲ್ಪಟ್ಟವು ಬೆಂಚುಗಳು

ಹುಡುಗರೆಲ್ಲ ಕೂತರು ತಂದ ತಿಂಡಿ ಡಬ್ಬದೊಂದಿಗೆ
ಅಡುಗೆ ಭಟ್ಟರೂ ಸಜ್ಜಾದರು ತಮ್ಮ ಸರಂಜಾಮಿನೊಂದಿಗೆ

ಹೋದಾಗ ಮೈಸೂರಿನ ಪ್ರಾಣಿಸಂಗ್ರಹಾಲಯಕೆ
ಚಿರತೆಯ ಮರಿಯೊಂದು ಎಗರಿ ನಮ್ಮ ಹುಡುಗನೊಬ್ಬನ ಬೀಳಿಸಿತು ಕೆಳಕೆ
ಅವನಿಗೆ ಏನೂ ತೊಂದರೆಯಾಗಲಿಲ್ಲ ಅದೃಷ್ಟಕೆ

ದೀಪ ಹಿಡಿದು ನಿಂತ ಮಹಿಳೆಯ ಚಿತ್ರ ನೋಡಿದ ಕಲಾ ಗ್ಯಾಲರಿ
ಮರೆಯಲು ಹೀಗೆ ಸಾಧ್ಯಾರಿ

ಕಣ್ಣರಳಿಸಿ ನೋಡಿದೆವು ಹಳೇಬೀಡಿನ ಶಿಲ್ಪಕಲೆ
ಕಲ್ಲಿನಲ್ಲಿ ಕೊರೆದ ಶಿವನು ಧರಿಸಿದ ರುಂಡಮಾಲೆ

ಹೊಸ ಅನುಭವವ ನೀಡಿದ ಶಿಕ್ಷಕರನು ಸ್ಮರಿಸಿ
ಇಂದಿಗೂ ಮಕ್ಕಳೆಲ್ಲ ನಿಲ್ಲುವರು ಅವರಿಗೆ ನಮಸ್ಕರಿಸಿ


Sunday, January 19, 2020

ಲಾಲ್ ಬಾಗ್ ಪುಷ್ಪ ಪ್ರದರ್ಶನ ಜನೆವರಿ ೨೦೨೦




ಈ ಜನವರಿಯ ಲಾಲ್ಬಾಗ್ ಪುಷ್ಪ ಪ್ರದರ್ಶನ
ತೋರುವುದು ವಿವೇಕಾನಂದರ ಜೀವನ ದರ್ಶನ

ಗಾಜಿನ ಮನೆಯಲಿ ಶೋಭಿಸುತಿವೆ ವಿವೇಕರ ಮೂರುತಿ ಹೂವುಗಳಿಂದ ರಚಿತವಾಗಿದೆ ರಾಕ್ ಮೆಮೋರಿಯಲ್ ಕೃತಿ

 ಮಾರಾಟಕ್ಕಿವೆ ಆಧ್ಯಾತ್ಮಿಕ ಪುಸ್ತಕಗಳು
 ಕರಕುಶಲ ವಸ್ತುಗಳು, ತಿಂಡಿ ಪೊಟ್ಟಣಗಳು

ಸಿಗುವವು ಅಲಂಕಾರಿಕ ಸಸ್ಯಗಳು
ಬಗೆಬಗೆಯ ಹೂವಿನ ಗಿಡಗಳು

ಕರೆಯುತಿದೆ ಕೈಬೀಸಿ ಸಸ್ಯಕಾಶಿ 
ತುಂಬಿ ತುಳುಕುತ ಹೂಗಳ ರಾಶಿ

ಅಡ್ಡಾಡಿ ಬನ್ನಿ ನಾಲ್ಕಾರು ಗಂಟೆ
ಗಟ್ಟಿ ಮುಟ್ಟಾಗುವವು ಕೈಕಾಲು ರಟ್ಟೆ.