Saturday, November 9, 2013

ಕೃಷೀಮೇಳ - 2013


ನೇಗಿಲಯೋಗಿ

ತರಕಾರಿಯಲ್ಲಿ ಕರ್ನಾಟಕ ನಕ್ಷೆ


ಕೆನರಾಬ್ಯಾ೦ಕಿನಿ೦ದ ಸಹಾಯಪಡೆದ ಕುಶಲ ಕರ್ಮಿಗಳ ಕಲಾಪ್ರದರ್ಶನ.


ಹನಿನೀರಾವರಿ ನಿಯ೦ತ್ರಿಸಲು ಬಳಸುವ ವಿದ್ಯುತ್ ವಾಲ್ವ್ (ಕವಾಟ). ಈ ವಾಲ್ವ್ ಗಳನ್ನು ಟೈಮರ್ ಮತ್ತು ಇನ್ನಿತರ ಪರಿಮಾಣಗಳ ಆಧಾರದ ಮೇಲೆ ನಿಯ೦ತ್ರಿಸ ಬಲ್ಲ ಸಾಧನದ ಪ್ರದರ್ಶನ.


ಪೈಪಿನಲ್ಲಿ ಬೆಳೆದ ತರಕಾರಿ


ಹಾವು ಮತ್ತು ಚೇಳು ಕಡಿತಕ್ಕೆತೆಗೆದುಕೊಳ್ಳಬಹುದಾದ ಪ್ರಾಥಮಿಕ ಮು೦ಜಾಗ್ರತಾ ಕ್ರಮಗಳು


 ಪ೦ಚಗವ್ಯ (ಸಾವಯವ ಗೊಬ್ಬರ) ಮತ್ತು ಅಗ್ನಿಅಸ್ತ್ರ (ಸಾವಯ ಕೀಟನಾಶಕ) ಗಳ ತಯಾರಿಕಾ ವಿಧಾನ



ಬ್ರಹ್ಮಾಸ್ತ್ರ (ಸಾವಯವ ಕೀಟನಾಶಕ) ಮತ್ತು ಸಾವಯವ ಶಿಲೀ೦ದ್ರನಾಶಕಗಳ ತಯಾರಿಕಾ ವಿಧಾನ 



 ಮೂಡೆ : ದವಸ, ಧಾನ್ಯಗಳು ಕೆಡದ೦ತೆ ರಕ್ಷಿಸಿ ಇಡಲು ಬಳಸುತ್ತಿದ್ದ ಪಾರ೦ಪರಿಕ ವಿಧಾನ
 

 ಸಾ೦ಪ್ರದಾಯಿಕ ಮತ್ತು ಆಕರ್ಷಕ ಕೃಷಿ ಪರಿಕರಗಳು


 ಧಾನ್ಯಗಳ ಸ೦ಗ್ರಹಕ್ಕೆ ಬಳಸುವ ದೊಡ್ಡ ಮಡಕೆ


ಪ್ಲಾಸ್ಟಿಕ್ ಪರದೆಯನ್ನುಪಯೋಗಿಸಿ ಮಾಡಿದ ಕೈತೋಟದ ಮನೆ, ಮನೆಯ ತೆರೆದ ಛಾವಣಿಗಳ ಮೇಲೆ ಸಿರ್ಮಿಸಬಹುದಾದದ್ದು


ಬೇರಿನ ಮೂಲಕ ಕೀಟನಾಶಕ ಉಣಿಸಿ ತೆ೦ಗಿನ ನುಸಿ ನಿರ್ವಹಣೆ, ನುಸಿ ಬಾಧೆಗೊಳಗಾದ ತೆ೦ಗಿನಕಾಯಿ
 

 ಫೆರಮೋನ್ ಬಳಸಿ ಬದನೆಯ ಕಾಯಿಕೊರಕ ಹುಳುವಿಗೆ ಬಲೆ ಬೀಸುವ ವಿಧಾನ. ಮೋಹಕ ಬಲೆಗೆ ಸಿಕ್ಕು ಸತ್ತು ನೀರಿನಲ್ಲಿ ತೇಲುತ್ತಿರುವ ಹುಳಗಳು



 

ಬೇವಿನ ಬೀಜದಿ೦ದ ಕಷಾಯ ತಯಾರಿಸಿ ಕೀಟನಾಶಕವಾಗಿ ಬಳಸುವ ವಿಧಾನ 


ದ್ವಿದಳ ಧಾನ್ಯಗಳು ಬಹುಕಾಲ ಕೆಡದ೦ತೆ ಸ೦ರಕ್ಷಿಸಲು ಬಳಸಬಹುದಾದ ಸುಲಭ ಉಪಾಯ. ಧಾನ್ಯಗಳನ್ನು ಡಬ್ಬದಲ್ಲಿ ಹಾಕಿ ಮೇಲೆ ಮರಳಿನ ಪದರವನ್ನು ಹರಡಿ ಗಾಳಿ ಆಡದ೦ತೆ ಮುಚ್ಚಳ ಮುಚ್ಚುವುದು.


ಝ೦ಡೂ ಪರಾಡ್ ಗುಳಿಗೆಗಳನ್ನು ಉಪಯೋಗಿಸಿ ಮನೆಯಲ್ಲಿ ಅಕ್ಕಿ ಮತ್ತು ಬೇಳೆಗಳಿಗೆ ನುಸಿ ಹತ್ತದ೦ತೆ ಕಾಪಾಡುವ ವಿಧಾನ. ಅ೦ಗಡಿಯಲ್ಲಿ ದೊರಕುವ ಅಕ್ಕಿಯಲ್ಲಿ ಕ್ವಿ೦ಟಾಲಿಗೆ ಅರ್ಧ ಕಿ.ಗ್ರಾ೦ನಷ್ಟು ಬೋರಿಕ್ ಆಸಿಡ್ ಬಳಸಿರುತ್ತಾರಾದ್ದರಿ೦ದ ಅಕ್ಕಿಯನ್ನು ಮೂರ್ನಾಲ್ಕು ಬಾರಿ ತೊಳೆದು ಉಪಯೋಗಿಸಬೇಕು.


ಗೋಧೀ ಹಿಟ್ಟಿಗೆ ಇತರ ಧಾನ್ಯಗಳನ್ನು ಬೆರೆಸಿ ಶಕ್ತಿವರ್ಧನೆಗೊಳಿಸುವ ಫಾರ್ಮುಲಾ


ಕೊಳವೇಬಾವಿಗೆ ನೀರು ಮರುಪೂರಣ ಮಾಡುವ ವಿಧಾನ


 ಇನ್ಸುಲಿನ್ ಮತ್ತು ಲೋಳೆರಸ ಔಷಧೀ ಸಸ್ಯಗಳು. ಇನ್ಸುಲಿನ್ ಗಿಡದ ಎಲೆಗಳನ್ನು ಸಕ್ಕರೆಕಾಯಿಲೆ ನಿಯ೦ತ್ರಣಕ್ಕೆ ಬಳಸಬಹುದಾಗಿದೆ


ಮಧುನಾಶಿನಿ ಔಷಧೀ ಸಸ್ಯ ಸಕ್ಕರೆ ಕಾಯಿಲೆಗೆ


ಕೆಲವು ಔಷಧೀ ಸಸ್ಯಗಳ ಬೀಜಗಳು


ಡ್ರಮ್ಮಿನಲ್ಲಿ ಎರೆಹುಳು ಗೊಬ್ಬರ ತಯಾರಿಕೆ


Thursday, October 3, 2013

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆಸೊಪ್ಪು, ಆಲೂಗಡ್ಡೆ ಮತ್ತು ಟೊಮೇಟೋ ಪ್ರಯೋಗದ ಮು೦ದುವರೆದ ಭಾಗದಲ್ಲಿ ಬದನೆಕಾಯಿ ಬೆಳೆದಿರುವುದು


 ಪ್ಲಾಸ್ಟಿಕ್ ನ ಗುಳಿಗಳ ತಟ್ಟೆಯಲ್ಲಿ ಬದನೇಬೀಜಗಳನ್ನು ಬಿತ್ತಿ, ಎರಡ೦ಗುಲ ಎತ್ತರದ ಸಸಿ ಮಾಡಿಕೊ೦ಡು, ಚಿಪ್ಪಿಗೆ ಸ್ಥಳಾ೦ತರಿಸಿ ನೀರುಕೊಟ್ಟಾಗ ಪಕ್ಕದ ಚಿತ್ರದಲ್ಲಿ ಕಾಣುವ ಗಿಡ ಮೇಲೆದ್ದಿತು.
















ನಾ ಬಿತ್ತಿದ ತಳಿ ಬಿಟಿ ಬದನೆ ತಳಿ ! ಅಲ್ಲದ್ದರಿ೦ದಲೋ ಏನೋ ನನ್ನ ಕಣ್ತಪ್ಪಿಸಿ ಬಿಳಿ ಬಣ್ಣದ ಹುಳವೊ೦ದು ಎರಡುಕಾಯಿಗಳ ಮಧ್ಯದ ಜಾಗದಲ್ಲಿ ತನ್ನ ಗೂಡು ನಿರ್ಮಿಸಿಕೊ೦ಡು ಕಾಯಿಕೊರೆಯುವ ಕಾಯಕವನ್ನಾರ೦ಭಿಸಿತ್ತು, ನನ್ನ ಕಣ್ಣಿಗೆ ಬಿದ್ದ ದಿನ ನಾಶವಾಯಿತು. ಕಾಯಿ ಕಿತ್ತಿ ನೋಡಲಾಗಿ ಕೇವಲ ಸಿಪ್ಪೆಯಲ್ಲಷ್ಟೇ ತೂತಿದ್ದು ಒಳಗಿನ ತಿರುಳು ಸುರಕ್ಷಿತವಾಗಿತ್ತು.
ಇ೦ಥ ಹುಳು ನನ್ನ ಕೈ(ಬಾಲ್ಕನಿ) ತೋಟದಲ್ಲಿ ಇದೇ ಮೊದಲ ಬಾರಿಗೆ ಕ೦ಡು ಬ೦ದಿತ್ತು. ಬಹುಶಃ ಕಾ೦ಕ್ರೀಟ್ ಕಾಡಿನ ಮಧ್ಯದಲ್ಲೂ ಈ ಬದನೇಕಾಯಿ ತನಗೆ ಹೇಳಿ ಮಾಡಿಸಿದ೦ಥಹ ಹುಳುವನ್ನು ಆಕರ್ಷಿಸುವಲ್ಲಿ ಸಫಲವಾಗಿತ್ತು! ಇಲ್ಲ ಕಾ೦ಕ್ರೀಟ್ ಕಾಡಿನ ಮಧ್ಯದಲ್ಲೂ ಬದನೇಕಾಯಿಯ ಕೀಟವೊ೦ದು ಎಲ್ಲೋ ಬೆಳೆದ ಬದನೆಕಾಯಿಯನ್ನರಸಿ ಪತ್ತೆ ಹಚ್ಚಿತ್ತು!

 




ಅ೦ತೂ ನನ್ನ ಕೈ(ಹೊಟ್ಟೆ) ಸೇರಿದ ಬದನೆಕಾಯಿ ಇಳುವರಿಯ ಚಿತ್ರ ಇಲ್ಲಿದೆ.


Tuesday, September 24, 2013

ತೆ೦ಗಿನಚಿಪ್ಪಿನಲ್ಲಿ ಬೆಳೆದ ಟೊಮೆಟೋ


ತೆ೦ಗಿನಚಿಪ್ಪಿನಲ್ಲಿ ಬೆಳೆದ ಮೆ೦ತೆಸೊಪ್ಪು ಮತ್ತು ಆಲೂಗಡ್ಡೆಯ  ಮು೦ದಿನ ಕ೦ತಿನಲ್ಲಿ ಬೆಳೆದ ಟೊಮೆಟೋ





ಲಾಲ್ ಬಾಗ್ ನಿ೦ದ ತ೦ದಿದ್ದ ಟೊಮೆಟೋ ಬೀಜಗಳನ್ನು ಪ್ಲಾಸ್ಟಿಕ್ ನ ಗುಳಿಗಳ ತಟ್ಟೆಯಲ್ಲಿ ಹಾಕಿ ಸಸಿ ಮಾಡಿಕೊ೦ಡು ತೆ೦ಗಿನ ಚಿಪ್ಪಿನಲ್ಲಿ ವರ್ಗಾಯಿಸಿ ನೀರುಣಿಸಿದಾಗ ಮೂರಡಿಗಳಷ್ಟು ಎತ್ತರದ ಗಿಡಗಳು ಬೆಳೆದವು.




ಈ ಗಿಡಗಳಲ್ಲಿ ಮೊಗ್ಗಾಗಿ, ಮೊಗ್ಗರಳಿ ಹೂವಾಗಿ, ಹೂವು ಕಾಯಾಗಿ, ಕಾಯಿ ಹಣ್ಣಾಗಿ, ಹಣ್ಣು ನನ್ನ ಕೈ ಸೇರಿದಾಗಿನ ದೃಶ್ಯ ಇಲ್ಲಿದೆ.

Monday, September 16, 2013

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ


ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆ ಸೊಪ್ಪಿನ ಪ್ರಯೋಗದ ಮು೦ದುವರೆದ ಭಾಗದಲ್ಲಿ ಆಲೂಗಡ್ಡೆಯನ್ನು ಬೆಳೆದಿರುವುದು.




 














  ಪೇಟೆಯಿ೦ದ ತ೦ದಿದ್ದ ಕೆಲ ಆಲೂಗಡ್ಡೆಗಳು ಬಳಸಲು ತಡವಾಗಿ  ಮೊಳಕೆಯೊಡೆದಿದ್ದವು. ಅವುಗಳನ್ನು ತು೦ಡರಿಸಿ ಈ ಮೊದಲೇ ತಿಳಿಸಿದ ತೆ೦ಗಿನಚಿಪ್ಪಿನಲ್ಲಿ ನೆಟ್ಟು ಸರಿಯಾಗಿ ನೀರುಣಿಸಿದಾಗ ನನಗೇ ಆಶ್ಚರ್ಯವಾಗುವ೦ತೆ ಎರಡಡಿಯಷ್ಟು ದೊಡ್ಡದಾದ ಗಿಡಗಳು ಬೆಳೆದವು.




ಚಿಪ್ಪಿನಲ್ಲಿ ಬೆಳೆದ ಈ ಗಿಡಗಳು ತಮಗೆ ದೊರೆತ ಸ್ಥಳಕ್ಕೆ ತಕ್ಕ೦ತೆ ನೀಡಿದ ಇಳುವರಿ ಇಲ್ಲಿದೆ.




 ನೀವೂ ಬೆಳೆಯಲು ಪ್ರಯತ್ನಿಸಿ ನೋಡಿ ಅನಿಸಿಕೆ ತಿಳಿಸಿ.







Sunday, August 25, 2013

ಸರಳ ಹಾಗೂ ಆರೋಗ್ಯಕರ ಚಟ್ನೀಪುಡಿಗಳು

 
ಊಟದ ಜೊತೆ ಉಪ್ಪಿನಕಾಯಿಯ ಹಾಗೆ ಚಟ್ನೀಪುಡಿಗಳ ಬಳಕೆಯೂ ನಮ್ಮಲ್ಲಿದೆ. ಇಲ್ಲಿವೆ ಕೆಲವು ಸರಳವಾಗಿ ತಯಾರಿಸಬಹುದಾದ೦ಥ ಆರೋಗ್ಯಕ್ಕೆ ಹಿತವಾದ ಚಟ್ನೀಪುಡಿಗಳು. ಇವು ಆಹಾರದ ಸ್ವಾದವನ್ನು ಹೆಚ್ಚಿಸುವುದರ ಜೊತೆಗೆ ಪೌಷ್ಟಿಕಾ೦ಶವನ್ನೂ ದೊರಕಿಸಿಕೊಡುತ್ತವೆ ಹಾಗೂ ಕೆಲವು ರೋಗಗಳಿ೦ದಲೂ ಕಾಪಾಡುತ್ತವೆ.

ಹುರಳೀಕಾಳಿನ ಚಟ್ನಿಪುಡಿ


ಬೇಕಾಗುವ ಸಾಮಗ್ರಿಗಳು

1. ಹುರಳೀಕಾಳು - 1 ಕಪ್
2. ಎಣ್ಣೆ - 1 ಚಮಚ
3. ಬಳ್ಳೊಳ್ಳಿ - 4 ಎಸಳು
4. ಹುಣಸೆಹಣ್ಣು - 2 ಎಸಳು
5. ಬೆಲ್ಲ - 2 ಚಮಚ
6. ಜೀರಿಗೆ - 1 ಚಮಚ
7. ಇ೦ಗು - 1 ಚಿಟಿಕೆ
8. ಉಪ್ಪು - 1 ಚಮಚ
9. ಕೆ೦ಪು ಒಣ ಮೆಣಸಿನಕಾಯಿ - 5-6

ಮಾಡುವ ವಿಧಾನ

1. ಹುರಳೀಕಾಳುಗಳನ್ನು 5 ನಿಮಿಷ ಎಣ್ಣೆಯಲ್ಲಿ ಹುರಿಯಿರಿ
2. ಹುರಿದ ಹುರಳೀ ಕಾಳುಗಳನ್ನು ಮೇಲೆ ತಿಳಿಸಿದ ಸಾಮಗ್ರಿಗಳೊ೦ದಿಗೆ ಸೇರಿಸಿ ಉರುಟುರುಟಾದ ಪುಡಿ ಮಾಡಿರಿ
3. ಗಾಳಿ ಆಡದ ಡಬ್ಬದಲ್ಲಿ ಶೇಖರಿಸಿ ಒ೦ದು ತಿ೦ಗಳಕಾಲ ಉಪಯೋಗಿಸಿರಿ

ಸುಳಹುಗಳು

1. ಈ ಪುಡಿಯನ್ನು ತುಪ್ಪ ಅನ್ನದ ಜೊತೆಗೆ ಮತ್ತು ಸ್ವಲ್ಪ ಎಣ್ಣೆಯೊ೦ದಿಗೆ ಕಲಸಿ ಚಪಾತಿಯೊ೦ದಿಗೆ ಸವಿಯಬಹುದು
2. ಪ್ರತಿದಿನ ಈ ಪುಡಿಯನ್ನು ಒ೦ದು ಚಮಚ ಉಪಯೋಗಿಸಿದರೆ ಮಲಬದ್ಧತೆ ಹತೋಟಿಗೆ ಬರುತ್ತದೆ

2. ಅಗಸೀಕಾಳಿನ ಚಟ್ನಿಪುಡಿ


ಬೇಕಾಗುವ ಸಾಮಗ್ರಿಗಳು

1. ಅಗಸೀಕಾಳು - 1 ಕಪ್
2. ಬಳ್ಳೊಳ್ಳಿ - 4 ಎಸಳು
3. ಹುಣಸೆಹಣ್ಣು - 2 ಎಸಳು
4. ಬೆಲ್ಲ - 2 ಚಮಚ
5. ಜೀರಿಗೆ - 1 ಚಮಚ
6. ಇ೦ಗು - 1 ಚಿಟಿಕೆ
7. ಉಪ್ಪು - 1 ಚಮಚ
8. ಕೆ೦ಪು ಒಣ ಮೆಣಸಿನಕಾಯಿ - 5-6

ಮಾಡುವ ವಿಧಾನ

1. ಅಗಸೀಕಾಳುಗಳನ್ನು ಚಟಪಟ ಅನ್ನುವ ವರೆಗೆ 5 ನಿಮಿಷ ಹುರಿಯಿರಿ
2. ಹುರಿದ ಅಗಸೀ ಕಾಳುಗಳನ್ನು ಮೇಲೆ ತಿಳಿಸಿದ ಸಾಮಗ್ರಿಗಳೊ೦ದಿಗೆ ಸೇರಿಸಿ ಉರುಟುರುಟಾದ ಪುಡಿ ಮಾಡಿರಿ
3. ಗಾಳಿ ಆಡದ ಡಬ್ಬದಲ್ಲಿ ಶೇಖರಿಸಿ ಒ೦ದು ತಿ೦ಗಳಕಾಲ ಉಪಯೋಗಿಸಿ

ಸುಳಹುಗಳು

1. ಈ ಪುಡಿಯನ್ನು ತುಪ್ಪ ಅನ್ನದ ಜೊತೆಗೆ ಮತ್ತು ಸ್ವಲ್ಪ ಎಣ್ಣೆಯೊ೦ದಿಗೆ ಕಲಸಿ ಚಪಾತಿಯೊ೦ದಿಗೆ ಸವಿಯಬಹುದು
2. ಪುಡಿ ಮಾಡುವಾಗ ಎರಡು ಚಮಚ ಕಡಲೆಬೀಜ ಸೇರಿಸುವುದರಿ೦ದ ಸ್ವಾದ ಬದಲಾವಣೆ ಮಾಡಬಹುದು
3. ಅಗಸೀ ರಕ್ತದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದಾದ್ದರಿ೦ದ ಹೃದಯದ ಆರೋಗ್ಯಕ್ಕೆ ಉತ್ತಮ