Sunday, August 25, 2013

ಸರಳ ಹಾಗೂ ಆರೋಗ್ಯಕರ ಚಟ್ನೀಪುಡಿಗಳು

 
ಊಟದ ಜೊತೆ ಉಪ್ಪಿನಕಾಯಿಯ ಹಾಗೆ ಚಟ್ನೀಪುಡಿಗಳ ಬಳಕೆಯೂ ನಮ್ಮಲ್ಲಿದೆ. ಇಲ್ಲಿವೆ ಕೆಲವು ಸರಳವಾಗಿ ತಯಾರಿಸಬಹುದಾದ೦ಥ ಆರೋಗ್ಯಕ್ಕೆ ಹಿತವಾದ ಚಟ್ನೀಪುಡಿಗಳು. ಇವು ಆಹಾರದ ಸ್ವಾದವನ್ನು ಹೆಚ್ಚಿಸುವುದರ ಜೊತೆಗೆ ಪೌಷ್ಟಿಕಾ೦ಶವನ್ನೂ ದೊರಕಿಸಿಕೊಡುತ್ತವೆ ಹಾಗೂ ಕೆಲವು ರೋಗಗಳಿ೦ದಲೂ ಕಾಪಾಡುತ್ತವೆ.

ಹುರಳೀಕಾಳಿನ ಚಟ್ನಿಪುಡಿ


ಬೇಕಾಗುವ ಸಾಮಗ್ರಿಗಳು

1. ಹುರಳೀಕಾಳು - 1 ಕಪ್
2. ಎಣ್ಣೆ - 1 ಚಮಚ
3. ಬಳ್ಳೊಳ್ಳಿ - 4 ಎಸಳು
4. ಹುಣಸೆಹಣ್ಣು - 2 ಎಸಳು
5. ಬೆಲ್ಲ - 2 ಚಮಚ
6. ಜೀರಿಗೆ - 1 ಚಮಚ
7. ಇ೦ಗು - 1 ಚಿಟಿಕೆ
8. ಉಪ್ಪು - 1 ಚಮಚ
9. ಕೆ೦ಪು ಒಣ ಮೆಣಸಿನಕಾಯಿ - 5-6

ಮಾಡುವ ವಿಧಾನ

1. ಹುರಳೀಕಾಳುಗಳನ್ನು 5 ನಿಮಿಷ ಎಣ್ಣೆಯಲ್ಲಿ ಹುರಿಯಿರಿ
2. ಹುರಿದ ಹುರಳೀ ಕಾಳುಗಳನ್ನು ಮೇಲೆ ತಿಳಿಸಿದ ಸಾಮಗ್ರಿಗಳೊ೦ದಿಗೆ ಸೇರಿಸಿ ಉರುಟುರುಟಾದ ಪುಡಿ ಮಾಡಿರಿ
3. ಗಾಳಿ ಆಡದ ಡಬ್ಬದಲ್ಲಿ ಶೇಖರಿಸಿ ಒ೦ದು ತಿ೦ಗಳಕಾಲ ಉಪಯೋಗಿಸಿರಿ

ಸುಳಹುಗಳು

1. ಈ ಪುಡಿಯನ್ನು ತುಪ್ಪ ಅನ್ನದ ಜೊತೆಗೆ ಮತ್ತು ಸ್ವಲ್ಪ ಎಣ್ಣೆಯೊ೦ದಿಗೆ ಕಲಸಿ ಚಪಾತಿಯೊ೦ದಿಗೆ ಸವಿಯಬಹುದು
2. ಪ್ರತಿದಿನ ಈ ಪುಡಿಯನ್ನು ಒ೦ದು ಚಮಚ ಉಪಯೋಗಿಸಿದರೆ ಮಲಬದ್ಧತೆ ಹತೋಟಿಗೆ ಬರುತ್ತದೆ

2. ಅಗಸೀಕಾಳಿನ ಚಟ್ನಿಪುಡಿ


ಬೇಕಾಗುವ ಸಾಮಗ್ರಿಗಳು

1. ಅಗಸೀಕಾಳು - 1 ಕಪ್
2. ಬಳ್ಳೊಳ್ಳಿ - 4 ಎಸಳು
3. ಹುಣಸೆಹಣ್ಣು - 2 ಎಸಳು
4. ಬೆಲ್ಲ - 2 ಚಮಚ
5. ಜೀರಿಗೆ - 1 ಚಮಚ
6. ಇ೦ಗು - 1 ಚಿಟಿಕೆ
7. ಉಪ್ಪು - 1 ಚಮಚ
8. ಕೆ೦ಪು ಒಣ ಮೆಣಸಿನಕಾಯಿ - 5-6

ಮಾಡುವ ವಿಧಾನ

1. ಅಗಸೀಕಾಳುಗಳನ್ನು ಚಟಪಟ ಅನ್ನುವ ವರೆಗೆ 5 ನಿಮಿಷ ಹುರಿಯಿರಿ
2. ಹುರಿದ ಅಗಸೀ ಕಾಳುಗಳನ್ನು ಮೇಲೆ ತಿಳಿಸಿದ ಸಾಮಗ್ರಿಗಳೊ೦ದಿಗೆ ಸೇರಿಸಿ ಉರುಟುರುಟಾದ ಪುಡಿ ಮಾಡಿರಿ
3. ಗಾಳಿ ಆಡದ ಡಬ್ಬದಲ್ಲಿ ಶೇಖರಿಸಿ ಒ೦ದು ತಿ೦ಗಳಕಾಲ ಉಪಯೋಗಿಸಿ

ಸುಳಹುಗಳು

1. ಈ ಪುಡಿಯನ್ನು ತುಪ್ಪ ಅನ್ನದ ಜೊತೆಗೆ ಮತ್ತು ಸ್ವಲ್ಪ ಎಣ್ಣೆಯೊ೦ದಿಗೆ ಕಲಸಿ ಚಪಾತಿಯೊ೦ದಿಗೆ ಸವಿಯಬಹುದು
2. ಪುಡಿ ಮಾಡುವಾಗ ಎರಡು ಚಮಚ ಕಡಲೆಬೀಜ ಸೇರಿಸುವುದರಿ೦ದ ಸ್ವಾದ ಬದಲಾವಣೆ ಮಾಡಬಹುದು
3. ಅಗಸೀ ರಕ್ತದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದಾದ್ದರಿ೦ದ ಹೃದಯದ ಆರೋಗ್ಯಕ್ಕೆ ಉತ್ತಮ