ವ್ಯಾಘ್ರನಿಗಿದು ತವರು
ಗಜಪಡೆಗಳಿಲ್ಲಿ ನೂರಾರು
ಕಪ್ಪು ಮೂತಿಯ ವಾನರ
ಕೂಗುವನು ಅರಿತು ಸಂಚಕಾರ
ನವಿಲುಗಳ ನರ್ತನ
ಇಳಿಸುವುದು ಪ್ರಸ್ಥಭೂಮಿಗೆ ನಂದನ
ಕಲ್ಲುಗುಡ್ಡದ ಕರಡಿ
ತಿನ್ನುವನು ಗೆದ್ದಲುಗಳ ಹುಡುಕಾಡಿ
ಬಿಳಿ ಕಾಲಿನ ಕಾಡೆಮ್ಮೆ
ನೀ ನಿಲ್ಲುವೆ ಕಲ್ಲಿನಂತೆ ಒಮ್ಮೊಮ್ಮೆ
ನೂರು ಬಗೆಯ ಮೀನುಗಳು
ಅನ್ವೇಷಿಸಿರದ ಹವಳಗಳು
ಚುಕ್ಕಿ ಮೈಯ ಚಿರತೆ
ನಿನಗೆ ಮರವ ಹತ್ತಲೂ ಬರುತ್ತೆ
ಕೂಟದಲಿ ಬೇಟೆಯಾಡುವ ಕೆನ್ನಾಯಿ
ನೀರಿನಲಿ ಪರಾಕ್ರಮ ತೋರುವ ನೀರ್ನಾಯಿ
ಇತರ ಉರಗಗಳ ನುಂಗುವ ಕಾಳಿಂಗ
ನಿನ್ನ ಶಾಂತಿಗಿಲ್ಲ ಇಲ್ಲಿ ಯಾವುದೇ ಭಂಗ
ಬಗೆಬಗೆಯ ಬಣ್ಣದ ಹಕ್ಕಿ
ಹರಿಯುತಿಹುದು ನಿನ್ನ ಸೊಬಗು ಉಕ್ಕಿ
ಮರದ ಮೇಲೆ ಅಡಗಿ ಕೂಡುವ ಓತಿ
ಮರದಿಂದ ಮರಕೆ ರೆಕ್ಕೆಬಿಚ್ಚಿ ಹಾರುತಿ
ನೂರಾರು ಬಗೆಯ ಕಪ್ಪೆಗಳು
ಕಲಿತಿರುವವು ಕೆಲವು ಕೈಕಾಲ್ಸನ್ನೆ ಮಾಡಲು
ವಿಷದ ಹಣ್ಣುಗಳ ತಿನ್ನುವ ಹಾರ್ನಬಿಲ್
ನಿನಗಿಲ್ಲ ಭಯ ಇಲ್ಲಿ ಬಿಲ್ಕುಲ್
ಪಶ್ಚಿಮ ಘಟ್ಟದ ಆಕರ್ಷಣೆ
ಹಾಕುವುದು ಮುಂಗಾರು ಮಳೆಗೆ ಮಣೆ
ತರುವುದು ಮಳೆ
ಕಾಡಿಗೆ ಹೊಸ ಕಳೆ
ಜಲಮೂಲಗಳ ತುಂಬಿಸಿ
ಕಾಡಿನ ದಾಹ ತಣಿಸಿ
No comments:
Post a Comment