ನಾ ನೋಡಿದ್ದು, ಬರೆದಿದ್ದು
Wednesday, February 5, 2020
ಬಿರಿದ ಬೀಜ
ಬಿರಿಯುವ ಬೀಜವ ನೋಡಲ್ಲಿ
ಬರಿಗಣ್ಣಿಗೆ ಕಾಣದ ಪರಿಯಲ್ಲಿ
ಬೀಜವ ಬಿತ್ತಲು ಗೆರೆಯಲ್ಲಿ
ನಿಂತಿವೆ ಸಸಿ ಸಾಲಲ್ಲಿ
ಎಂಥಹ ಸೋಜಿಗ ಜಗದಲ್ಲಿ
ವರ್ಣಿಸಲಸದಳ ಮಾತಲ್ಲಿ
ತಳಮಳ ತುಂಬಿದ ಮನದಲ್ಲಿ
ಹಾಸಿದೆ ಹಸಿರಿನ ರಂಗವಲ್ಲಿ
Monday, February 3, 2020
ಊಟ ಸ್ನಾನ ಮತ್ತು ಆರೋಗ್ಯ
ಒಡಲು ಹಸಿಯದೆ ಉಂಡರೆ ಏನು ಸುಖ?
ದೇಹ ಬೆವರದೆ ಮಿಂದರೆ ಅಲ್ಪಸುಖ
ಇರುವ ಸುತ್ತಣವ ಶುಚಿಗೊಳಿಸಿ
ಕೈಗೆ ಮಣ್ಣ ಅಂಟಿಸಿ ಬೆವರನು ಹರಿಸಿ
ದೇಹವ ದಂಡಿಸಿ ಒಡಲನು ಸಡಿಲಿಸಿ
ಬೆವರಿ ಮಿಂದರೆ ಪರಮಸುಖ
ಹಸಿದು ಉಂಡರೆ ಆರೋಗ್ಯದ ಕಡೆ ಮುಖ
Newer Posts
Older Posts
Home
Subscribe to:
Posts (Atom)