Wednesday, February 5, 2020

ಬಿರಿದ ಬೀಜ




ಬಿರಿಯುವ ಬೀಜವ ನೋಡಲ್ಲಿ
ಬರಿಗಣ್ಣಿಗೆ ಕಾಣದ ಪರಿಯಲ್ಲಿ

ಬೀಜವ ಬಿತ್ತಲು ಗೆರೆಯಲ್ಲಿ
ನಿಂತಿವೆ ಸಸಿ ಸಾಲಲ್ಲಿ

ಎಂಥಹ  ಸೋಜಿಗ ಜಗದಲ್ಲಿ
ವರ್ಣಿಸಲಸದಳ  ಮಾತಲ್ಲಿ

ತಳಮಳ ತುಂಬಿದ  ಮನದಲ್ಲಿ
ಹಾಸಿದೆ ಹಸಿರಿನ ರಂಗವಲ್ಲಿ

Monday, February 3, 2020

ಊಟ ಸ್ನಾನ ಮತ್ತು ಆರೋಗ್ಯ

ಒಡಲು ಹಸಿಯದೆ ಉಂಡರೆ ಏನು ಸುಖ?
ದೇಹ ಬೆವರದೆ ಮಿಂದರೆ ಅಲ್ಪಸುಖ

ಇರುವ ಸುತ್ತಣವ  ಶುಚಿಗೊಳಿಸಿ
ಕೈಗೆ ಮಣ್ಣ ಅಂಟಿಸಿ ಬೆವರನು ಹರಿಸಿ
ದೇಹವ ದಂಡಿಸಿ ಒಡಲನು ಸಡಿಲಿಸಿ

ಬೆವರಿ  ಮಿಂದರೆ ಪರಮಸುಖ
ಹಸಿದು ಉಂಡರೆ ಆರೋಗ್ಯದ ಕಡೆ ಮುಖ