Wednesday, January 22, 2020

ವನ್ಯ ಕರ್ನಾಟಕ





ವ್ಯಾಘ್ರನಿಗಿದು ತವರು
ಗಜಪಡೆಗಳಿಲ್ಲಿ ನೂರಾರು

ಕಪ್ಪು ಮೂತಿಯ ವಾನರ 
ಕೂಗುವನು ಅರಿತು ಸಂಚಕಾರ

ನವಿಲುಗಳ ನರ್ತನ  
ಇಳಿಸುವುದು ಪ್ರಸ್ಥಭೂಮಿಗೆ ನಂದನ

ಕಲ್ಲುಗುಡ್ಡದ ಕರಡಿ 
ತಿನ್ನುವನು ಗೆದ್ದಲುಗಳ ಹುಡುಕಾಡಿ

ಬಿಳಿ ಕಾಲಿನ ಕಾಡೆಮ್ಮೆ 
ನೀ ನಿಲ್ಲುವೆ ಕಲ್ಲಿನಂತೆ ಒಮ್ಮೊಮ್ಮೆ

ನೂರು ಬಗೆಯ ಮೀನುಗಳು
ಅನ್ವೇಷಿಸಿರದ ಹವಳಗಳು

ಚುಕ್ಕಿ ಮೈಯ ಚಿರತೆ 
ನಿನಗೆ ಮರವ ಹತ್ತಲೂ ಬರುತ್ತೆ

ಕೂಟದಲಿ ಬೇಟೆಯಾಡುವ ಕೆನ್ನಾಯಿ
 ನೀರಿನಲಿ ಪರಾಕ್ರಮ ತೋರುವ ನೀರ್ನಾಯಿ

ಇತರ ಉರಗಗಳ ನುಂಗುವ ಕಾಳಿಂಗ
ನಿನ್ನ ಶಾಂತಿಗಿಲ್ಲ ಇಲ್ಲಿ ಯಾವುದೇ ಭಂಗ

ಬಗೆಬಗೆಯ  ಬಣ್ಣದ ಹಕ್ಕಿ 
ಹರಿಯುತಿಹುದು ನಿನ್ನ ಸೊಬಗು ಉಕ್ಕಿ

ಮರದ ಮೇಲೆ ಅಡಗಿ ಕೂಡುವ ಓತಿ
ಮರದಿಂದ ಮರಕೆ ರೆಕ್ಕೆಬಿಚ್ಚಿ ಹಾರುತಿ

ನೂರಾರು ಬಗೆಯ ಕಪ್ಪೆಗಳು  
ಕಲಿತಿರುವವು ಕೆಲವು ಕೈಕಾಲ್ಸನ್ನೆ ಮಾಡಲು

ವಿಷದ ಹಣ್ಣುಗಳ ತಿನ್ನುವ ಹಾರ್ನಬಿಲ್
ನಿನಗಿಲ್ಲ ಭಯ ಇಲ್ಲಿ ಬಿಲ್ಕುಲ್

ಪಶ್ಚಿಮ ಘಟ್ಟದ ಆಕರ್ಷಣೆ 
ಹಾಕುವುದು ಮುಂಗಾರು ಮಳೆಗೆ ಮಣೆ

ತರುವುದು ಮಳೆ 
ಕಾಡಿಗೆ ಹೊಸ ಕಳೆ

ಜಲಮೂಲಗಳ ತುಂಬಿಸಿ 
ಕಾಡಿನ ದಾಹ ತಣಿಸಿ
ಹೊಸ ಚಕ್ರವ ಆರಂಭಿಸಿ.

Full Video
https://www.zoosofkarnataka.com/wild-karnataka

Tuesday, January 21, 2020

ಶಾಲೆಯ ಪ್ರವಾಸದ ನೆನಪು

ಅದು ಶಾಲೆಯಲ್ಲಿನ ನಮ್ಮ ಮೊದಲ ಪ್ರವಾಸ
ಮೂಡಿಸಿತ್ತು  ವಿದ್ಯಾರ್ಥಿಗಳಲಿ ಎಲ್ಲಿಲ್ಲದ ಸಂತಸ 

ಮೈಸೂರು ಬೇಲೂರು ಹಳೇಬೀಡು ಆಗಿದ್ದವು ನಮ್ಮ ಪ್ರವಾಸ ತಾಣ
ಶಿಕ್ಷಕರು ನಿರ್ಧರಿಸಿದರು ಹೊರಡಲು ರಾತ್ರಿ ಪ್ರಯಾಣ

ತುಂಬಿ ತುಳುಕಿದವು ಬಸ್ಸಿನ ಸೀಟುಗಳು
ಸೀಟಿನ ನಡುವೆಯೂ ಹಾಕಲ್ಪಟ್ಟವು ಬೆಂಚುಗಳು

ಹುಡುಗರೆಲ್ಲ ಕೂತರು ತಂದ ತಿಂಡಿ ಡಬ್ಬದೊಂದಿಗೆ
ಅಡುಗೆ ಭಟ್ಟರೂ ಸಜ್ಜಾದರು ತಮ್ಮ ಸರಂಜಾಮಿನೊಂದಿಗೆ

ಹೋದಾಗ ಮೈಸೂರಿನ ಪ್ರಾಣಿಸಂಗ್ರಹಾಲಯಕೆ
ಚಿರತೆಯ ಮರಿಯೊಂದು ಎಗರಿ ನಮ್ಮ ಹುಡುಗನೊಬ್ಬನ ಬೀಳಿಸಿತು ಕೆಳಕೆ
ಅವನಿಗೆ ಏನೂ ತೊಂದರೆಯಾಗಲಿಲ್ಲ ಅದೃಷ್ಟಕೆ

ದೀಪ ಹಿಡಿದು ನಿಂತ ಮಹಿಳೆಯ ಚಿತ್ರ ನೋಡಿದ ಕಲಾ ಗ್ಯಾಲರಿ
ಮರೆಯಲು ಹೀಗೆ ಸಾಧ್ಯಾರಿ

ಕಣ್ಣರಳಿಸಿ ನೋಡಿದೆವು ಹಳೇಬೀಡಿನ ಶಿಲ್ಪಕಲೆ
ಕಲ್ಲಿನಲ್ಲಿ ಕೊರೆದ ಶಿವನು ಧರಿಸಿದ ರುಂಡಮಾಲೆ

ಹೊಸ ಅನುಭವವ ನೀಡಿದ ಶಿಕ್ಷಕರನು ಸ್ಮರಿಸಿ
ಇಂದಿಗೂ ಮಕ್ಕಳೆಲ್ಲ ನಿಲ್ಲುವರು ಅವರಿಗೆ ನಮಸ್ಕರಿಸಿ