Friday, January 31, 2020
Thursday, January 30, 2020
Saturday, January 25, 2020
Wednesday, January 22, 2020
ವನ್ಯ ಕರ್ನಾಟಕ
ವ್ಯಾಘ್ರನಿಗಿದು ತವರು
ಗಜಪಡೆಗಳಿಲ್ಲಿ ನೂರಾರು
ಕಪ್ಪು ಮೂತಿಯ ವಾನರ
ಕೂಗುವನು ಅರಿತು ಸಂಚಕಾರ
ನವಿಲುಗಳ ನರ್ತನ
ಇಳಿಸುವುದು ಪ್ರಸ್ಥಭೂಮಿಗೆ ನಂದನ
ಕಲ್ಲುಗುಡ್ಡದ ಕರಡಿ
ತಿನ್ನುವನು ಗೆದ್ದಲುಗಳ ಹುಡುಕಾಡಿ
ಬಿಳಿ ಕಾಲಿನ ಕಾಡೆಮ್ಮೆ
ನೀ ನಿಲ್ಲುವೆ ಕಲ್ಲಿನಂತೆ ಒಮ್ಮೊಮ್ಮೆ
ನೂರು ಬಗೆಯ ಮೀನುಗಳು
ಅನ್ವೇಷಿಸಿರದ ಹವಳಗಳು
ಚುಕ್ಕಿ ಮೈಯ ಚಿರತೆ
ನಿನಗೆ ಮರವ ಹತ್ತಲೂ ಬರುತ್ತೆ
ಕೂಟದಲಿ ಬೇಟೆಯಾಡುವ ಕೆನ್ನಾಯಿ
ನೀರಿನಲಿ ಪರಾಕ್ರಮ ತೋರುವ ನೀರ್ನಾಯಿ
ಇತರ ಉರಗಗಳ ನುಂಗುವ ಕಾಳಿಂಗ
ನಿನ್ನ ಶಾಂತಿಗಿಲ್ಲ ಇಲ್ಲಿ ಯಾವುದೇ ಭಂಗ
ಬಗೆಬಗೆಯ ಬಣ್ಣದ ಹಕ್ಕಿ
ಹರಿಯುತಿಹುದು ನಿನ್ನ ಸೊಬಗು ಉಕ್ಕಿ
ಮರದ ಮೇಲೆ ಅಡಗಿ ಕೂಡುವ ಓತಿ
ಮರದಿಂದ ಮರಕೆ ರೆಕ್ಕೆಬಿಚ್ಚಿ ಹಾರುತಿ
ನೂರಾರು ಬಗೆಯ ಕಪ್ಪೆಗಳು
ಕಲಿತಿರುವವು ಕೆಲವು ಕೈಕಾಲ್ಸನ್ನೆ ಮಾಡಲು
ವಿಷದ ಹಣ್ಣುಗಳ ತಿನ್ನುವ ಹಾರ್ನಬಿಲ್
ನಿನಗಿಲ್ಲ ಭಯ ಇಲ್ಲಿ ಬಿಲ್ಕುಲ್
ಪಶ್ಚಿಮ ಘಟ್ಟದ ಆಕರ್ಷಣೆ
ಹಾಕುವುದು ಮುಂಗಾರು ಮಳೆಗೆ ಮಣೆ
ತರುವುದು ಮಳೆ
ಕಾಡಿಗೆ ಹೊಸ ಕಳೆ
ಜಲಮೂಲಗಳ ತುಂಬಿಸಿ
ಕಾಡಿನ ದಾಹ ತಣಿಸಿ
Tuesday, January 21, 2020
ಶಾಲೆಯ ಪ್ರವಾಸದ ನೆನಪು
ಅದು ಶಾಲೆಯಲ್ಲಿನ ನಮ್ಮ ಮೊದಲ ಪ್ರವಾಸ
ಮೂಡಿಸಿತ್ತು ವಿದ್ಯಾರ್ಥಿಗಳಲಿ ಎಲ್ಲಿಲ್ಲದ ಸಂತಸ
ಮೈಸೂರು ಬೇಲೂರು ಹಳೇಬೀಡು ಆಗಿದ್ದವು ನಮ್ಮ ಪ್ರವಾಸ ತಾಣ
ಶಿಕ್ಷಕರು ನಿರ್ಧರಿಸಿದರು ಹೊರಡಲು ರಾತ್ರಿ ಪ್ರಯಾಣ
ತುಂಬಿ ತುಳುಕಿದವು ಬಸ್ಸಿನ ಸೀಟುಗಳು
ಸೀಟಿನ ನಡುವೆಯೂ ಹಾಕಲ್ಪಟ್ಟವು ಬೆಂಚುಗಳು
ಹುಡುಗರೆಲ್ಲ ಕೂತರು ತಂದ ತಿಂಡಿ ಡಬ್ಬದೊಂದಿಗೆ
ಅಡುಗೆ ಭಟ್ಟರೂ ಸಜ್ಜಾದರು ತಮ್ಮ ಸರಂಜಾಮಿನೊಂದಿಗೆ
ಹೋದಾಗ ಮೈಸೂರಿನ ಪ್ರಾಣಿಸಂಗ್ರಹಾಲಯಕೆ
ಚಿರತೆಯ ಮರಿಯೊಂದು ಎಗರಿ ನಮ್ಮ ಹುಡುಗನೊಬ್ಬನ ಬೀಳಿಸಿತು ಕೆಳಕೆ
ಅವನಿಗೆ ಏನೂ ತೊಂದರೆಯಾಗಲಿಲ್ಲ ಅದೃಷ್ಟಕೆ
ದೀಪ ಹಿಡಿದು ನಿಂತ ಮಹಿಳೆಯ ಚಿತ್ರ ನೋಡಿದ ಕಲಾ ಗ್ಯಾಲರಿ
ಮರೆಯಲು ಹೀಗೆ ಸಾಧ್ಯಾರಿ
ಕಣ್ಣರಳಿಸಿ ನೋಡಿದೆವು ಹಳೇಬೀಡಿನ ಶಿಲ್ಪಕಲೆ
ಕಲ್ಲಿನಲ್ಲಿ ಕೊರೆದ ಶಿವನು ಧರಿಸಿದ ರುಂಡಮಾಲೆ
ಹೊಸ ಅನುಭವವ ನೀಡಿದ ಶಿಕ್ಷಕರನು ಸ್ಮರಿಸಿ
ಇಂದಿಗೂ ಮಕ್ಕಳೆಲ್ಲ ನಿಲ್ಲುವರು ಅವರಿಗೆ ನಮಸ್ಕರಿಸಿ
Sunday, January 19, 2020
ಲಾಲ್ ಬಾಗ್ ಪುಷ್ಪ ಪ್ರದರ್ಶನ ಜನೆವರಿ ೨೦೨೦
ಈ ಜನವರಿಯ ಲಾಲ್ಬಾಗ್ ಪುಷ್ಪ ಪ್ರದರ್ಶನ
ತೋರುವುದು ವಿವೇಕಾನಂದರ ಜೀವನ ದರ್ಶನ
ಗಾಜಿನ ಮನೆಯಲಿ ಶೋಭಿಸುತಿವೆ ವಿವೇಕರ ಮೂರುತಿ ಹೂವುಗಳಿಂದ ರಚಿತವಾಗಿದೆ ರಾಕ್ ಮೆಮೋರಿಯಲ್ ಕೃತಿ
ಮಾರಾಟಕ್ಕಿವೆ ಆಧ್ಯಾತ್ಮಿಕ ಪುಸ್ತಕಗಳು
ಕರಕುಶಲ ವಸ್ತುಗಳು, ತಿಂಡಿ ಪೊಟ್ಟಣಗಳು
ಸಿಗುವವು ಅಲಂಕಾರಿಕ ಸಸ್ಯಗಳು
ಬಗೆಬಗೆಯ ಹೂವಿನ ಗಿಡಗಳು
ಕರೆಯುತಿದೆ ಕೈಬೀಸಿ ಸಸ್ಯಕಾಶಿ
ತುಂಬಿ ತುಳುಕುತ ಹೂಗಳ ರಾಶಿ
ಅಡ್ಡಾಡಿ ಬನ್ನಿ ನಾಲ್ಕಾರು ಗಂಟೆ
ಗಟ್ಟಿ ಮುಟ್ಟಾಗುವವು ಕೈಕಾಲು ರಟ್ಟೆ.
Subscribe to:
Posts (Atom)